ಸೆಪ್ಟೆಂಬರ್ 2026 ಸ್ಮಾರ್ಟ್‌ಫೋನ್ (Upcoming Smartphones) ಪ್ರಿಯರಿಗೆ ಸಖತ್ ಬ್ಯುಸಿ ಆದ ತಿಂಗಳು. ಹೊಸ ಫೋನ್‌ಗಳನ್ನು ಖರೀದಿಸಲು ಕಾಯುತ್ತಿರುವವರಿಗೆ ಈ ತಿಂಗಳು ಹಲವು ರೋಚಕ ಆಶ್ಚರ್ಯಗಳು ಕಾದಿವೆ.
ಟೆಕ್ ಮಾರುಕಟ್ಟೆಯಲ್ಲಿ (Upcoming Smartphones) ದೊಡ್ಡ ಬ್ರ್ಯಾಂಡ್‌ಗಳೆಲ್ಲವೂ ತಮ್ಮ ಹೊಸ ಫ್ಲ್ಯಾಗ್‌ಶಿಪ್ ಹಾಗೂ ಮಿಡ್-ರೇಂಜ್ ಸಾಧನಗಳನ್ನು ಪರಿಚಯಿಸಲು ಭರ್ಜರಿ ಸಿದ್ಧತೆ ನಡೆಸಿವೆ.ಅದರಲ್ಲೂ ಈ ಬಾರಿಯ ಸೆಪ್ಟೆಂಬರ್ (Upcoming Smartphones)ಲಿಸ್ಟ್‌ನಲ್ಲಿ Apple, Samsung, Redmi ಹಾಗೂ POCO ಬ್ರ್ಯಾಂಡ್‌ಗಳ ಹೆಸರುಗಳು ಸಕ್ಕತ್ ಸದ್ದು ಮಾಡುತ್ತಿವೆ.
ಫೋನ್ ಪ್ರಿಯರ ಕಣ್ಣೆಲ್ಲವೂ ಮುಖ್ಯವಾಗಿ ಐಫೋನ್ 18 ಪ್ರೊ ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್26 ಎಫ್‌ಇ ಮೇಲೆ ನೆಟ್ಟಿದೆ. ಯಾವ ಫೋನ್ ಯಾವ ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಬರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
iPhone 18 Pro Series ವಿಶೇಷತೆಗಳುಪ್ರತಿ ವರ್ಷದಂತೆ ಈ ಬಾರಿಯೂ ಆಪಲ್ ಕಂಪನಿ ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಸೆಪ್ಟೆಂಬರ್ 9ರಂದು ವಿಶೇಷ ಲಾಂಚ್ ಇವೆಂಟ್ ನಡೆಸಲು ಆಪಲ್ ಸಜ್ಜಾಗಿದೆ ಎನ್ನಲಾಗಿದ್ದು, ಈ ವೇದಿಕೆಯಲ್ಲಿ ಹೊಸ iPhone 18 Pro ಮತ್ತು iPhone 18 Pro Max ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ.ಇಷ್ಟೇ ಅಲ್ಲದೆ, ಆಪಲ್‌ನ ಮೊದಲ ಫೋಲ್ಡಬಲ್ ಐಫೋನ್ ಕೂಡ ಇದೇ ಇವೆಂಟ್‌ನಲ್ಲಿ ಜಗತ್ತಿನ ಮುಂದೆ ಅನಾವರಣಗೊಳ್ಳುವ ಸಾಧ್ಯತೆಯಿದೆ ಎಂಬ ಮಾತುಗಳು ಟೆಕ್ ಲೋಕದಲ್ಲಿ ಕೇಳಿಬರುತ್ತಿವೆ.
ಹೊಸ ಐಫೋನ್ 18 ಪ್ರೊ ಸೀರೀಸ್‌ನಲ್ಲಿ ಪರ್ಫಾಮೆನ್ಸ್ ಮತ್ತು ಕ್ಯಾಮೆರಾ ವಿಭಾಗದಲ್ಲಿ ದೊಡ್ಡ ಮಟ್ಟದ ಅಪ್‌ಗ್ರೇಡ್‌ಗಳನ್ನು ನಿರೀಕ್ಷಿಸಬಹುದಾಗಿದೆ. (Upcoming Smartphones) ಕಂಪನಿಯು ಹೊಸ A20 Pro ಚಿಪ್‌ಸೆಟ್, ಸುಧಾರಿತ ಕ್ಯಾಮೆರಾ ಸಿಸ್ಟಮ್ ಮತ್ತು ಬ್ಯಾಟರಿ ಬ್ಯಾಕಪ್‌ಗೆ ಸಂಬಂಧಿಸಿದ ಹಲವು ರೋಚಕ ಬದಲಾವಣೆಗಳನ್ನು ತರಲಿದೆ ಎಂದು ವರದಿಗಳು ತಿಳಿಸಿವೆ.

(Upcoming Smartphones)
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿಯೆಂದರೆ, ಆಪಲ್ ಇನ್ನೂ ಅಧಿಕೃತವಾಗಿ ಯಾವುದೇ ಸ್ಪೆಸಿಫಿಕೇಷನ್ಸ್ ಅಥವಾ ಬೆಲೆ ವಿವರಗಳನ್ನು ರಿವೀಲ್ ಮಾಡಿಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ಲೀಕ್ಡ್ ಇನ್ಫಾರ್ಮೇಷನ್ ಅನ್ನು ಸಂಪೂರ್ಣ ಅಂತಿಮವೆಂದು ನಂಬುವಂತಿಲ್ಲ.
iPhone Fold / Ultra ಮೇಲಿನ ನಿರೀಕ್ಷೆಗಳುಆಪಲ್ ಪ್ರಿಯರು ಕಳೆದ ಹಲವು ವರ್ಷಗಳಿಂದ ಕಾಯುತ್ತಿದ್ದ ಮೊದಲ ಫೋಲ್ಡಬಲ್ ಐಫೋನ್ ಕೊನೆಗೂ ಸೆಪ್ಟೆಂಬರ್ ಇವೆಂಟ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಕೆಲವು ರಿಪೋರ್ಟ್‌ಗಳು ಈ ಹೊಸ ಫೋನ್ ಅನ್ನು iPhone Ultra ಅಥವಾ iPhone Fold ಎಂದು ಕರೆಯುತ್ತಿವೆ.ಮಾರುಕಟ್ಟೆಯಲ್ಲಿ ಈ ಡಿವೈಸ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದರೂ, ಆಪಲ್ ಕಂಪನಿ ಇನ್ನೂ ಅಧಿಕೃತವಾಗಿ ಇದರ ಹೆಸರು ಅಥವಾ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿಲ್ಲ.
ಹಾಗಾಗಿ ಲಾಂಚ್ ಇವೆಂಟ್ ಅಧಿಕೃತವಾಗಿ ನಡೆಯುವವರೆಗೂ ಇದೊಂದು ನಿರೀಕ್ಷಿತ ಡಿವೈಸ್ ಆಗಿಯೇ ಉಳಿದುಕೊಂಡಿದೆ.
Xiaomi 18 Fold: ಸೆಪ್ಟೆಂಬರ್‌ನಲ್ಲಿ ಬರಲಿದೆ ಹೊಸ Foldable Phoneಸೆಪ್ಟೆಂಬರ್ 2026ರ ಲಿಸ್ಟ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರೋ ಮತ್ತೊಂದು ಡಿವೈಸ್ ಅಂದ್ರೆ ಅದು Xiaomi 18 Fold. ಶಿಯೋಮಿ ತನ್ನ ಹೊಸ ಫೋಲ್ಡಬಲ್ ಸ್ಮಾರ್ಟ್‌ಫೋನ್ ಅನ್ನು ಇದೇ ತಿಂಗಳು ಮಾರುಕಟ್ಟೆಗೆ ಪರಿಚಯಿಸಲು ಸಜ್ಜಾಗಿದೆ.

ಬಂದಿರುವ ಲೇಟೆಸ್ಟ್ ವರದಿಗಳ ಪ್ರಕಾರ, (Upcoming Smartphones) ಶಿಯೋಮಿ 18 ಫೋಲ್ಡ್ ಸೆಪ್ಟೆಂಬರ್ 7ರಂದೇ ಲಾಂಚ್ ಆಗೋ ಸಾಧ್ಯತೆಯಿದೆ. ವಿಶೇಷ ಅಂದ್ರೆ, ಈ ಫೋನ್ ಶಿಯೋಮಿಯ ಸ್ವಂತ ಚಿಪ್‌ಸೆಟ್ ಆದ Xring O3 ಜೊತೆ ಬರ್ತಿದೆ ಅಂತ ಹೇಳಲಾಗ್ತಿದೆ.ಬಲವಾದ ಬ್ಯಾಟರಿ ಮತ್ತು ಕ್ಯಾಮೆರಾಶಿಯೋಮಿ 18 ಫೋಲ್ಡ್ ಫೋನ್‌ನಲ್ಲಿ ಸುಮಾರು 6,000mAh ವರೆಗಿನ ದೊಡ್ಡ ಬ್ಯಾಟರಿ ಸಿಗಬಹುದು ಅಂತ ರಿಪೋರ್ಟ್ಸ್ ತಿಳಿಸಿವೆ.
ಇದರ ಜೊತೆಗೆ ಫೋಟೋಗ್ರಾಫಿ ಪ್ರಿಯರಿಗಾಗಿ 200MP ವರೆಗಿನ ಮುಖ್ಯ ಕ್ಯಾಮೆರಾವನ್ನು ನೀಡುವ ಸಾಧ್ಯತೆಯೂ ದಟ್ಟವಾಗಿದೆ.ಈ ಫೋನ್‌ನ ಮೇನ್ ಹೈಲೈಟ್ ಅಂದ್ರೆ ಅದು ಇದರ ಫೋಲ್ಡಬಲ್ ಡಿಸೈನ್. ದೊಡ್ಡ ಸ್ಕ್ರೀನ್ ಬೇಕು ಅಂದಾಗ ಫೋನ್ ಅನ್ನು ಆರಾಮಾಗಿ ತೆರೆಯಬಹುದು.
ಇನ್ನು ಸಾಮಾನ್ಯ ಬಳಕೆಯ ವೇಳೆ ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಕಾಂಪ್ಯಾಕ್ಟ್ ಸೈಜ್‌ನಲ್ಲಿಯೂ ಬಳಸಿಕೊಳ್ಳುವ ಅವಕಾಶ ಇದರಲ್ಲಿದೆ.ಈ ಡಿವೈಸ್‌ನಲ್ಲಿ 3nm ತಂತ್ರಜ್ಞಾನದ Xring O3 ಪ್ರೊಸೆಸರ್ ಬಳಕೆಯಾಗಲಿದೆ ಅಂತ ಕಂಪನಿಗೆ ಹತ್ತಿರವಿರುವ ಮೂಲಗಳಿಂದ ಗೊತ್ತಾಗಿದೆ.
ಇದರೊಂದಿಗೆ LPDDR6 ಮೆಮೊರಿ ಸಪೋರ್ಟ್ ಕೂಡ ಇದರ ಮತ್ತೊಂದು ಮೇಜರ್ ಫೀಚರ್ ಆಗಿರಲಿದೆ.ಭಾರತದಲ್ಲಿ
ಲಾಂಚ್ ಯಾವಾಗ?
ಇಲ್ಲಿ ನೀವೆಲ್ಲ ಒಂದು ಮುಖ್ಯ ವಿಷಯ ಗಮನ್ಬೇಕು. ಶಿಯೋಮಿ 18 ಫೋಲ್ಡ್ ಸೆಪ್ಟೆಂಬರ್‌ನಲ್ಲೇ ಲಾಂಚ್ ಆಗ್ತಿದೆ ಅಂತ ಗೊತ್ತಿದ್ರೂ, ಭಾರತದಲ್ಲಿ ಇದೇ ಟೈಮ್‌ಗೆ ಸೇಲ್ ಶುರುವಾಗುತ್ತಾ ಇಲ್ವಾ ಅನ್ನೋದು ಇನ್ನು ಕನ್‌ಫರ್ಮ್ ಆಗಿಲ್ಲ.
ಹಾಗಾಗಿ ಭಾರತೀಯ ಗ್ರಾಹಕರು ಮತ್ತು ಟೆಕ್ ಪ್ರಿಯರು ಆಫೀಶಿಯಲ್ ಇಂಡಿಯಾ ಲಾಂಚ್ ಅನೌನ್ಸ್‌ಮೆಂಟ್ ಬರೋವರೆಗೂ ಸ್ವಲ್ಪ ಕಾಯ್ಲೇಬೇಕಾಗುತ್ತದೆ.Vivo X500 Series ಮೇಲೂ ಭಾರಿ ನಿರೀಕ್ಷೆಸೆಪ್ಟೆಂಬರ್ 2026ರಲ್ಲಿ ವಿವೋ (Vivo) ಕೂಡ ತನ್ನ ಹೊಸ X500 ಸೀರೀಸ್ ಅನ್ನು ಮಾರುಕಟ್ಟೆಗೆ ತರಲು ತಯಾರಿ ನಡೆಸಿದೆ.

ಪ್ರೀಮಿಯಂ ಸ್ಮಾರ್ಟ್‌ಫೋನ್ ಸೆಗ್ಮೆಂಟ್‌ನಲ್ಲಿ ವಿವೋ ಎಕ್ಸ್500 ಸೀರೀಸ್ ಉಳಿದ ಬ್ರ್ಯಾಂಡ್‌ಗಳಿಗೆ ಗಟ್ಟಿ ಪೈಪೋಟಿ ನೀಡೋದು ಖಂಡಿತ.
ಹೀಗೆ ಶಿಯೋಮಿ, ವಿವೋ ಜೊತೆಗೆ ಆಪಲ್ ಕಂಪನಿ ಕೂಡ ದೊಡ್ಡ ಇವೆಂಟ್ ಮಾಡ್ತಿರೋದ್ರಿಂದ, ಈ ಸೆಪ್ಟೆಂಬರ್ ತಿಂಗಳು ಸ್ಮಾರ್ಟ್‌ಫೋನ್ ಮಾರ್ಕೆಟ್‌ನಲ್ಲಿ ಸಖತ್ ಚರ್ಚೆಗೆ ಗ್ರಾಸವಾಗಿದೆ.
iQOO 16 ಮತ್ತು Vivo X500 Series: ಪರ್ಫಾಮೆನ್ಸ್ ಜೊತೆ ಕ್ಯಾಮೆರಾ ಹವಾಸೆಪ್ಟೆಂಬರ್ 2026ರ ಮುಂಬರುವ ಸ್ಮಾರ್ಟ್‌ಫೋನ್‌ಗಳ ಲಿಸ್ಟ್‌ನಲ್ಲಿ iQOO 16 ಕೂಡ ಹೈಲೈಟ್ ಆಗ್ತಿರೋ ಪ್ರಮುಖ ಫೋನ್. ಈ ಹೊಸ ಫೋನ್ ಚೀನಾ ಮಾರುಕಟ್ಟೆಯಲ್ಲಿ ಇದೇ ತಿಂಗಳು ಬಿಡುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ.
ಐಕೂ 16 ಫೋನ್‌ನಲ್ಲಿ ನೆಕ್ಸ್ಟ್ ಜನರೇಷನ್‌ನ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಸಿಗೋ ನಿರೀಕ್ಷೆಯಿದೆ. ಇದರೊಂದಿಗೆ ದೊಡ್ಡ ಹೈ-ರಿಫ್ರೆಶ್ ರೇಟ್ AMOLED ಡಿಸ್‌ಪ್ಲೇ ಹಾಗೂ ಗೇಮಿಂಗ್ ಪ್ರಿಯರಿಗಾಗಿ ಸ್ಪೆಷಲ್ ಪರ್ಫಾಮೆನ್ಸ್ ಇದರ ಮುಖ್ಯ ಆಕರ್ಷಣೆಯಾಗಲಿದೆ.ಇನ್ನು ಈ ಫೋನ್‌ನಲ್ಲಿ ದೊಡ್ಡ ಬ್ಯಾಟರಿ ಜೊತೆಗೆ 100W ಗಿಂತ ಹೆಚ್ಚಿನ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಿಗಬಹುದು ಅಂತ ರಿಪೋರ್ಟ್ಸ್ ಹೇಳ್ತಿವೆ.
ಆದ್ರೆ ಈ ಫೀಚರ್ಸ್‌ಗೆ ಸಂಬಂಧಿಸಿದಂತೆ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಕನ್‌ಫರ್ಮೇಷನ್ ಬಂದಿಲ್ಲ.Vivo X500 ಸೀರೀಸ್‌ನಲ್ಲಿ ಕ್ಯಾಮೆರಾ ಮೇನ್ ಅಟ್ರಾಕ್ಷನ್ವಿವೋ (Vivo X500 series) ಕೂಡ ಸೆಪ್ಟೆಂಬರ್ 2026ರಲ್ಲಿ ಚೀನಾದಲ್ಲಿ ತನ್ನ ಹೊಸ ಲೈನ್‌ಅಪ್ ಲಾಂಚ್ ಮಾಡೋದಕ್ಕೆ ಕಾಯ್ತಿದೆ.
ಈ ಸೀರೀಸ್‌ನಲ್ಲಿ X500, X500 Pro ಹಾಗೂ X500 Pro Max ಸೇರಿದಂತೆ ಹಲವು ಮಾಡೆಲ್‌ಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿವೆ ಅಂತ ಗೊತ್ತಾಗಿದೆ. (Upcoming Smartphones)ಈ ಇಡೀ ಸೀರೀಸ್‌ನಲ್ಲಿ Zeiss-tuned ಕ್ಯಾಮೆರಾ ಸೆಟಪ್ ಮೇನ್ ಹೈಲೈಟ್ ಆಗಿರಲಿದೆ.
ಅದರಲ್ಲೂ ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಮಾಡೆಲ್‌ಗಳಲ್ಲಿ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಕಡೆಗೆ ಕಂಪನಿ ಹೆಚ್ಚು ಗಮನ ಹರಿಸಿದೆ.ವಿವೋ ಎಕ್ಸ್500 ಪ್ರೊ ಮ್ಯಾಕ್ಸ್ ಫೋನ್‌ನಲ್ಲಿ 200MP Zeiss APO ಸೂಪರ್-ಟೆಲಿಫೋಟೋ ಕ್ಯಾಮೆರಾ ಸಿಗುವ ಸಾಧ್ಯತೆಯಿದೆ.
ಇದರ ಜೊತೆಗೆ ಇಂಪ್ರೂವ್ಡ್ ಆಟೋಫೋಕಸ್ ಮತ್ತು ಅತ್ಯುತ್ತಮ ಇಮೇಜ್ ಸ್ಟೆಬಿಲೈಸೇಶನ್ ಫೀಚರ್ಸ್‌ಗಳು ಕೂಡ ಇದರಲ್ಲಿ ಇರೋದು ಕನ್ಫರ್ಮ್ ಆದಂಗಿದೆ.
ಮೈವಿ ಒನ್ 5G (Mivi One 5G) ಮೇಲೂ ಕಣ್ಣುಭಾರತೀಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ Mivi ಕಂಪನಿ ತನ್ನ ಮೊದಲ 5G ಸ್ಮಾರ್ಟ್‌ಫೋನ್ ಅನ್ನು ಸೆಪ್ಟೆಂಬರ್‌ನಲ್ಲೇ ಪರಿಚಯಿಸಲು ಸಜ್ಜಾಗಿದೆ. ಮೈವಿ ಒನ್ 5G ಫೋನ್ ಸೆಪ್ಟೆಂಬರ್ 24ರಂದು ಲಾಂಚ್ ಆಗಬಹುದು ಅಂತ ನಿರೀಕ್ಷಿಸಲಾಗಿದೆ.

ಈ ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್ ಹಾಗೂ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಸಿಗಲಿದೆ ಅಂತ ವರದಿಯಾಗಿದೆ.
ಆದ್ರೆ ಫೋನ್‌ನ ಸಂಪೂರ್ಣ ಸ್ಪೆಸಿಫಿಕೇಷನ್ಸ್ ಮತ್ತು ಬೆಲೆ ಎಷ್ಟು ಎಂಬ ಕಂಪ್ಲೀಟ್ ಡೀಟೇಲ್ಸ್ ಲಾಂಚ್ ಟೈಮ್‌ನಲ್ಲೇ ಗೊತ್ತಾಗಲಿದೆ.
ಈ ಸೆಪ್ಟೆಂಬರ್ ತಿಂಗಳು ಯಾಕೆ ಇಷ್ಟು ಸ್ಪೆಷಲ್?
ಈ ತಿಂಗಳಲ್ಲಿ ಫ್ಲ್ಯಾಗ್‌ಶಿಪ್ ಫೋನ್‌ಗಳು, ಫೋಲ್ಡಬಲ್ ಡಿವೈಸ್‌ಗಳು ಹಾಗೂ ಮಿಡ್-ರೇಂಜ್ ಸ್ಮಾರ್ಟ್‌ಫೋನ್‌ಗಳು ಅಂತ ನಾನಾ ವೆರೈಟಿಯ ಹೊಸ ಮಾಡೆಲ್‌ಗಳು ಮಾರ್ಕೆಟ್‌ಗೆ ಬರ್ತಿವೆ.ಆಪಲ್, ರೆಡ್ಮಿ, ವಿವೋ, ಶಿಯೋಮಿ ಮತ್ತು ಐಕೂ ಸೇರಿದಂತೆ ದೊಡ್ಡ ದೊಡ್ಡ ಬ್ರ್ಯಾಂಡ್‌ಗಳೆಲ್ಲ ಒಂದೇ ಟೈಮ್‌ನಲ್ಲಿ ಹೊಸ ಫೋನ್‌ಗಳನ್ನು ತರ್ತಿರೋದ್ರಿಂದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಪೈಪೋಟಿ ನಗಾಲಿ ಹುಟ್ಟುಹಾಕಿದೆ.
ಸೂಚನೆ :
ಈ ಲಿಸ್ಟ್‌ನಲ್ಲಿರೋ ಕೆಲವು ಫೋನ್‌ಗಳಿಗೆ ಇನ್ನೂ ಲಾಂಚ್ ಡೇಟ್ ಅಧಿಕೃತವಾಗಿಲ್ಲ. ಅದ್ರಿಂದ ನೀವೇನಾದ್ರೂ ಹೊಸ ಫೋನ್ ತಗೊಳ್ಳೋ ಪ್ಲ್ಯಾನಲ್ಲಿದ್ದರೆ, ಕಂಪನಿಯ ಆಫೀಶಿಯಲ್ ಅನೌನ್ಸ್‌ಮೆಂಟ್ ಬರೋವರೆಗೂ ಕಾಯೋದು ಒಳ್ಳೆಯದು. ಒಟ್ಟಿನಲ್ಲಿ ಸೆಪ್ಟೆಂಬರ್ 2026 ಹೊಸ ಫೋನ್ ಖರೀದಿಸೋರಿಗೆ ಭರ್ಜರಿ ಆಪ್ಷನ್ಸ್‌ಗಳನ್ನು ತಂದಿದೆ.
ಸರ್ಕಾರ ಉದ್ಯೋಗ ಮಾಹಿತಿ ಹಾಗೂ ನ್ಯೂಸ್ ಅಪ್ಡೇಟ್ ಗಾಗಿ https://kannadiga27.in/ ಅನ್ನು ವಿಸಿಟ್ ಮಾಡಿ
Top 3 best ev car’s ಬೆಸ್ಟ್ ಟಾಪ್ 3 ev ಕಾರ್ ಗಳು ಇಲ್ಲಿವೆ ಖರೀದಿ ಮಾಡೋ ಐಡಿಯಾ ಇದ್ದರೆ ಇದನ್ನು ಒಮ್ಮೆ ನೋಡಿ. ಇದನ್ನು ಓದಿ…
Krishna Janmashtami : ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ ಜೋರಾಗಿದೆ, ನಾಳೆ ವಿಟ್ಲಪಿಂಡಿ ಉತ್ಸವ! ಇದನ್ನು ಓದಿ..
https://Unizonekannada.com ಅನ್ನು ವಿಸಿಟ್ ಮಾಡಿ
