ಕಸ್ತೂರಿರಂಗನ್ ವರದಿ: ಸಮಗ್ರ ಮರುಸರ್ವೆ, ಗ್ರಾಮಸಭೆ ನಡೆಸಿ ಎಂದು ಸುನೀಲ್ ಹೆಗಡೆ ಆಗ್ರಹ

ಅಗ್ರಹ, ಮರುಸರ್ವೆ ನಡೆಸಿ ಎಂದು ಬಿಜೆಪಿ ಮುಖಂಡ ಸುನೀಲ್ ಹೆಗಡೆ ಆಗ್ರಹಿಸಿದ್ದಾರೆ.ಕಾರವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಅಗತ್ಯವಿದೆ. ಆದರೆ ಇದರ ಹೆಸರಿನಲ್ಲಿ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗಬಾರದು ಎಂದು ಎಚ್ಚರಿಸಿದ್ದಾರೆ.

ಜೋಯಿಡಾ ತಾಲೂಕಿನ ಕೆಲ ಗ್ರಾಮಗಳ ಜನರನ್ನು ಸ್ಥಳಾಂತರಿಸುವ ಯತ್ನ ನಡೆಯುತ್ತಿದೆ. ಮತ್ತೊಂದಡೆ ಅಭಿವೃದ್ಧಿ ಕೆಲಸಗಳಿಗೂ ನಿರ್ಬಂಧಗಳಿವೆ ಎಂಬ ಆತಂಕ ಜನರಲ್ಲಿದೆ.ಈ ವರದಿ ಜಾರಿಯಾದರೆ ಸ್ಥಳೀಯರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ.

ಜೋಯಿಡಾ ತಾಲೂಕಿನ 111 ಗ್ರಾಮಗಳು ಸೇರಿದಂತೆ ಆರು ರಾಜ್ಯಗಳ 188 ತಾಲೂಕುಗಳು ಇದರ ವ್ಯಾಪ್ತಿಗೆ ಬರುತ್ತವೆ.ಕ್ಷೇತ್ರದ ವಾಸ್ತವಿಕ ಅಧ್ಯಯನವಿಲ್ಲದೆ, ಕೇವಲ ಅಂಕಿ-ಅಂಶಗಳ ಆಧಾರದಲ್ಲಿ ವರದಿ ಸಿದ್ಧಪಡಿಸಿರುವುದೇ ವಿರೋಧಕ್ಕೆ ಪ್ರಮುಖ ಕಾರಣ ಎಂದರು. ಬಫರ್ ವಲಯ, ವನ್ಯಜೀವಿ ಪ್ರದೇಶ ಹಾಗೂ ಕೋರ್ ಏರಿಯಾಗಳನ್ನು ಮತ್ತೊಮ್ಮೆ ಸಮಗ್ರವಾಗಿ ಸರ್ವೆ ಮಾಡಬೇಕು ಎಂಬುದು ಇವರ ಬೇಡಿಕೆ.ವಿಧಾನಸಭೆ ಅಧಿವೇಶನಕ್ಕೂ ಮುನ್ನ ಪ್ರತಿ ಗ್ರಾಮದಲ್ಲೂ ಗ್ರಾಮಸಭೆ ನಡೆಸಿ ಜನರ ಅಭಿಪ್ರಾಯ ಸಂಗ್ರಹಿಸಬೇಕು.

ಕಸ್ತೂರಿರಂಗನ್ ವರದಿ:

ಕಸ್ತೂರಿರಂಗನ್ ವರದಿ ಹಾಗೂ ಕೇಂದ್ರದ 7ನೇ ಕರಡು ಅಧಿಸೂಚನೆ ವ್ಯಾಪ್ತಿಗೆ ಕರ್ನಾಟಕದ ಒಟ್ಟು 10 ಜಿಲ್ಲೆಗಳು ಸೇರ್ಪಡೆಗೊಂಡಿವೆ. ಆ ಜಿಲ್ಲೆಗಳು ಯಾವುವೆಂದರೆ:​

ಉತ್ತರ ಕನ್ನಡ (ಕಾರವಾರ)

​ಶಿವಮೊಗ್ಗ​

ಕೊಡಗು​

ಚಿಕ್ಕಮಗಳೂರು

​ಹಾಸನ​ಬೆಳಗಾವಿ​

ದಕ್ಷಿಣ ಕನ್ನಡ (ಮಂಗಳೂರು)​

ಉಡುಪಿ​

ಮೈಸೂರು​

ಚಾಮರಾಜನಗರ​

ಈ 10 ಜಿಲ್ಲೆಗಳ ಒಟ್ಟು 33 ತಾಲ್ಲೂಕುಗಳು ಹಾಗೂ 1,449 ಗ್ರಾಮಗಳು ಪರಿಸರ ಸೂಕ್ಷ್ಮ ಪ್ರದೇಶದ (ESA) ವ್ಯಾಪ್ತಿಗೆ ಬರಲಿವೆ.

ಸ್ಥಳೀಯರ ಅಭಿಪ್ರಾಯದ ಆಧಾರದಲ್ಲೇ ಸರ್ಕಾರ (ಕಸ್ತೂರಿರಂಗನ್ ವರದಿ) ಸಮಗ್ರ ವರದಿ ತಯಾರಿಸಿ ಸದನದಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕಸ್ತೂರಿರಂಗನ್ ವರದಿ

ಕೇಂದ್ರದ 7ನೇ ಕರಡು ಅಧಿಸೂಚನೆ ಕುರಿತು ಕರ್ನಾಟಕ ಸರ್ಕಾರ ತನ್ನ ಆಕ್ಷೇಪ ವ್ಯಕ್ತಪಡಿಸಿದೆ. (ಕಸ್ತೂರಿರಂಗನ್ ವರದಿ) ಪ್ರಸ್ತುತ ರೂಪದಲ್ಲೇ ಈ ಅಧಿಸೂಚನೆಯನ್ನು ಅಂತಿಮಗೊಳಿಸಬಾರದು ಎಂಬುದು ಸರ್ಕಾರದ ನಿಲುವಾಗಿದೆ.ರಾಜ್ಯದ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ವ್ಯಾಪ್ತಿಗೆ ಸೇರಿಸುವ ಪ್ರಸ್ತಾವನೆ ಇದೆ.

ಇದರ ಅಡಿಯಲ್ಲಿ 10 ಜಿಲ್ಲೆಗಳ 33 ತಾಲ್ಲೂಕುಗಳು ಹಾಗೂ 1,449 ಗ್ರಾಮಗಳು ಬರಲಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ಪರಿಸರ ಸಂರಕ್ಷಣೆ ಜತೆಗೆ ಸ್ಥಳೀಯ ಕೃಷಿಕರು ಹಾಗೂ ಜನರ ಹಿತವೂ ಮುಖ್ಯ ಎಂಬುದು ಸರ್ಕಾರದ ನಿಲುವು.

ಈ ಕುರಿತು ಚರ್ಚಿಸಲು ಮತ್ತು ರಾಜ್ಯದ ಸ್ಪಷ್ಟ ನಿಲುವನ್ನು ತಿಳಿಸಲು ಆಗಸ್ಟ್ 26ರಂದು ಒಂದು ದಿನದ ವಿಶೇಷ ವಿಧಾನಮಂಡಲ ಅಧಿವೇಶನ ಕರೆಯುವುದಾಗಿ ಸಿಎಂ ತಿಳಿಸಿದ್ದಾರೆ.

ಕಸ್ತೂರಿರಂಗನ್ ವರದಿ ವಿಚಾರದಲ್ಲಿ ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಜನರ ಬದುಕಿನ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯವಾಗಿದೆ.

ಕಸ್ತೂರಿರಂಗನ್ ವರದಿ

ಅರಣ್ಯ, ಕೃಷಿ ಮತ್ತು ಜನವಸತಿ ಪ್ರದೇಶಗಳನ್ನು ನಿಖರವಾಗಿ ಗುರುತಿಸಲು ಸಮಗ್ರ ಮರುಸರ್ವೆ ನಡೆಸಬೇಕು ಹಾಗೂ ಗ್ರಾಮಸಭೆಗಳ ಮೂಲಕ ಜನರ ಅಭಿಪ್ರಾಯ ಪಡೆಯಬೇಕು ಎಂಬ ಬಲವಾದ ಬೇಡಿಕೆ ಕೇಳಿಬಂದಿದೆ.

ಕೇಂದ್ರದ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಅಂತಿಮಗೊಳಿಸಬಾರದು ಎಂಬುದು ಸರ್ಕಾರದ ನಿಲುವಾಗಿದ್ದು, ಈ ಕುರಿತು ಚರ್ಚಿಸಲು ವಿಶೇಷ ವಿಧಾನಮಂಡಲ ಅಧಿವೇಶನ ಕರೆಯಲಾಗಿದೆ.

ಸುನೀಲ್ ಹೆಗಡೆ ಅವರ ಈ ಆಗ್ರಹದ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರಗಳು ಮತ್ತು ಕೇಂದ್ರದೊಂದಿಗೆ ನಡೆಯುವ ಮಾತುಕತೆಗಳ ಮೇಲೆ ಪಶ್ಚಿಮಘಟ್ಟದ ಜನರ ಗಮನ ನೆಟ್ಟಿದೆ.

ಹೆಚ್ಚಿನ ಮಾಹಿತಿ ತಿಳಿಯಲು https://publictv.in/ ಇಲ್ಲಿ ವಿಸಿಟ್ ಮಾಡಿ..

ಉದ್ಯೋಗ ಮಾಹಿತಿ ತಿಳಿಯಲು https://kannadiga27.in/ ಅನ್ನು ವಿಸಿಟ್ ಮಾಡಿ…

Dakshina Kannada Auto Fare Hike : ದಕ್ಷಿಣ ಕನ್ನಡ ಜಿಲ್ಲೆಯ ಆಟೋ ಪ್ರಯಣಿರಿಗೆ ಬಿಗ್ಗ್ ಶಾಕ್ ಆಟೋ ದರ ಏರಿಕೆ? ಇದನ್ನು ಓದಿ…

Meesho maha Sunday sale : ಸೆಪ್ಟೆಂಬರ್ 6 ರಿಂದ ಮೀಶೋ ದಲ್ಲಿ ಮಹಾ ಸಂಡೆ ಸೇಲ್ ಶುರು ಏನೆಲ್ಲಾ ಆಫರ್ ಗಳಿವೆ? ಇದನ್ನು ಓದಿ…

1 thought on “ಕಸ್ತೂರಿರಂಗನ್ ವರದಿ: ಸಮಗ್ರ ಮರುಸರ್ವೆ, ಗ್ರಾಮಸಭೆ ನಡೆಸಿ ಎಂದು ಸುನೀಲ್ ಹೆಗಡೆ ಆಗ್ರಹ”

Leave a Comment