Forest Watcher Recruitment 2026: 10ನೇ ತರಗತಿ ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ, ಅರ್ಜಿ ವಿವರ ಇಲ್ಲಿದೆ

10ನೇ ತರಗತಿ ಪಾಸಾದವ್ರಿಗೆ ಫಾರೆಸ್ಟ್ ವಾಚರ್ (Forest Watcher) ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕಾತಿಗೆ ಸಂಬಂಧಪಟ್ಟ ಹಾಗೆ ಅರ್ಜಿ ಸಲ್ಲಿಸೋ ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2026ರವರೆಗೆ ವಿಸ್ತರಣೆ ಮಾಡಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡ್ಬೇಕು ಅನ್ನೋ ಕನಸು ಕಂಡಿರೋ ಆಕಾಂಕ್ಷಿಗಳಿಗೆ ಇದೊಂದು ಸಕ್ಕತ್ ಅವಕಾಶ ಅಂತಾನೆ ಹೇಳ್ಬಹುದು. ಆದ್ರೆ, ಅರ್ಜಿ ಹಾಕೋಕೆ ಮುಂಚೆ ನಿಮ್ಗೆ ಅರ್ಹತೆ ಏನಿರಬೇಕು, ಯಾವ ಪ್ರದೇಶ ಆಯ್ಕೆ ಮಾಡ್ಕೋಬೇಕು, ಏನೆಲ್ಲಾ ದಾಖಲೆಗಳು ಬೇಕು ಅನ್ನೋದ್ರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋದು ತುಂಬಾ ಮುಖ್ಯ.

Forest Watcher Recruitment 2026 ಎಂದರೇನು?ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕ ಫಾರೆಸ್ಟ್ ವಾಚರ್ ಹುದ್ದೆಗಳಿಗೆ ಆನ್‌ಲೈನ್ ಅಪ್ಲಿಕೇಶನ್ ಪ್ರಕ್ರಿಯೆ ಭರಾಟೆಯಿಂದ ಸಾಗ್ತಿದೆ.

ಆಸಕ್ತರು ಕಡ್ಡಾಯವಾಗಿ ಅಧಿಕೃತ ರಿಕ್ರೂಟ್‌ಮೆಂಟ್ ಪೋರ್ಟಲ್ ಮುಖಾಂತರವೇ ಅರ್ಜಿ ಸಲ್ಲಿಸಬೇಕಾಗುತ್ತೆ.ಈ ನೇಮಕಾತಿಯಲ್ಲಿ ಅಭ್ಯರ್ಥಿಗಳಿಗೆ ಪ್ರಮುಖವಾಗಿ HK Region (ಕಲ್ಯಾಣ ಕರ್ನಾಟಕ ಪ್ರದೇಶ) ಮತ್ತು Non-HK Region (ಕಲ್ಯಾಣ ಕರ್ನಾಟಕ ಹೊರಗಿನ ಪ್ರದೇಶ) ಎಂಬ ಎರಡು ಆಯ್ಕೆಗಳನ್ನು ನೀಡಲಾಗಿದೆ.

HK ಮತ್ತು Non-HK ಅಂದರೆ ಏನು?

Forest Watcher Recruitment 2026

ಅರ್ಜಿ ಸಲ್ಲಿಸುವಾಗ ನಿಮ್ಗೆ ಯಾವ ಪ್ರದೇಶ ಅನ್ವಯಿಸುತ್ತೆ ಅನ್ನೋದನ್ನ ಬಹಳ ಎಚ್ಚರಿಕೆಯಿಂದ ನೋಡ್ಕೋಬೇಕು.

* HK Region: ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದೆ.

* Non-HK Region: ಕಲ್ಯಾಣ ಕರ್ನಾಟಕ ಪ್ರದೇಶದ ಹೊರಗಿನ ಉಳಿದ ಪ್ರದೇಶಗಳನ್ನ

(Residual Parent Cadre/Other than Kalyana Karnataka) ಒಳಗೊಂಡಿದೆ.

ಅಧಿಕೃತ ಪೋರ್ಟಲ್‌ನಲ್ಲಿ ಸ್ಪಷ್ಟಪಡಿಸಿರುವ ಹಾಗೆ, ಅಭ್ಯರ್ಥಿಗಳು HK ಅಥವಾ Non-HK Region ಇವೆರಡರಲ್ಲಿ ಯಾವುದಾದ್ರೂ ಒಂದಕ್ಕೆ ಮಾತ್ರ ಅರ್ಜಿ ಹಾಕೋಕೆ ಅವಕಾಶವಿದೆ.

ಎರಡೂ ಕಡೆ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಲು ಬರುವುದಿಲ್ಲ. ಅದ್ರಿಂದ ಅರ್ಜಿ ತುಂಬುವಾಗ ಈ ಬಗ್ಗೆ ಎಚ್ಚರಿಕೆ ಇರಲಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ?

ಫಾರೆಸ್ಟ್ ವಾಚರ್ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 30 ಸೆಪ್ಟೆಂಬರ್ 2026ರವರೆಗೆ ವಿಸ್ತರಿಸಲಾಗಿದೆ.

ಕೊನೆಯ ದಿನದವರೆಗೂ ಕಾಯ್ಕೊಂಡು ಕೂರದೆ, ಆದಷ್ಟು ಬೇಗ ಅರ್ಜಿ ಪ್ರಕ್ರಿಯೆಯನ್ನು ಮುಗಿಸೋದು ಉತ್ತಮ.

ಅರ್ಜಿ ಸಲ್ಲಿಸುವುದು ಹೇಗೆ?

Forest Watcher Recruitment 2026

* ಮೊದಲಿಗೆ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ರಿಕ್ರೂಟ್‌ಮೆಂಟ್ ಪೋರ್ಟಲ್‌ಗೆ ಭೇಟಿ ನೀಡಿ. * ಅಲ್ಲಿ “Register Here” ಅಥವ https://recruitment.aranya.gov.in ಈ ಕ್ಲಿಕ್ ಮಾಡಿ ಈ ಲಿಂಕ್ ಬಳಸಿ ಹೊಸ ಅಭ್ಯರ್ಥಿಯಾಗಿ ನೋಂದಣಿ ಮಾಡ್ಕೊಳ್ಳಿ. ಈಗಾಗಲೇ ಐಡಿ ಇರೋರು ನೇರವಾಗಿ ಲಾಗಿನ್ ಆಗಬಹುದು. ನಿಮ್ಮ Registration ID ಮತ್ತು ಹುಟ್ಟಿದ ದಿನಾಂಕ (Date of Birth) ಬಳಸಿ ಲಾಗಿನ್ ಆದ ಬಳಿಕ ಅರ್ಜಿ ಪ್ರಕ್ರಿಯೆ ಮುಂದುವರಿಸಿ.

ಕೇಳಲಾದ ವೈಯಕ್ತಿಕ ಮಾಹಿತಿ, ವಿದ್ಯಾರ್ಹತೆ ಮತ್ತು ಇತರ ಅಗತ್ಯ ವಿವರಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ.

ಫಾರೆಸ್ಟ್ ವಾಚರ್ ಹುದ್ದೆಗೆ ಯಾರು ಅರ್ಹರು?

ಫಾರೆಸ್ಟ್ ವಾಚರ್ ರಿಕ್ರೂಟ್‌ಮೆಂಟ್ 2026 (Forest Watcher Recruitment 2026) ಕ್ಕೆ ಅರ್ಜಿ ಹಾಕೋಕೂ ಮುಂಚೆ ನಿಮ್ಗೆ ಅರ್ಹತೆ ಏನಿರಬೇಕು ಅನ್ನೋದನ್ನ ಸರಿಯಾಗಿ ಚೆಕ್ ಮಾಡ್ಕೋಬೇಕು. ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲೇ ರಿಜಿಸ್ಟ್ರೇಷನ್ ಮತ್ತು ಅಪ್ಲಿಕೇಶನ್ ಪ್ರಕ್ರಿಯೆ ಇದೆ.

ಆದ್ರೆ, ಬರೀ ಸೋಶಿಯಲ್ ಮೀಡಿಯಾ ಪೋಸ್‌ಟ್‌ಗಳು ಅಥವಾ ಯಾವುದೋ ಉದ್ಯೋಗ ವೆಬ್‌ಸೈಟ್ ನಂಬಿ ಅಷ್ಟೇ ಅರ್ಜಿ ಹಾಕೋಕೆ ಹೋಗ್ಬೇಡಿ. ಅರ್ಹತೆ, ವಯೋಮಿತಿ, ಮೀಸಲಾತಿ ಹಾಗೂ ಶುಲ್ಕದ ಬಗ್ಗೆ ಕಡ್ಡಾಯವಾಗಿ ಅಧಿಕೃತ ಅಧಿಸೂಚನೆ (Official Notification) ಓದ್ಕೊಂಡು ಅಪ್ಲೈ ಮಾಡೋದು ಜಾಣತನ.

ಅರ್ಜಿ ಹಾಕುವ ಮುನ್ನ ಏನೆಲ್ಲಾ ರೆಡಿ ಇಟ್ಕೋಬೇಕು?

ಫಾರೆಸ್ಟ್ ವಾಚರ್ ಆನ್‌ಲೈನ್ ಅಪ್ಲಿಕೇಶನ್ ಹಾಕೋಕೆ ಶುರು ಮಾಡೋದಕ್ಕೂ ಮುಂಚೆ, ನಿಮ್ ಹತ್ರ ಬೇಕಾಗುವ ಎಲ್ಲಾ ವೈಯಕ್ತಿಕ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಕೈಯಲ್ಲಿ ಇಟ್ಕೊಳ್ಳಿ.ನಿಮ್ಮ ಹೆಸರು, ಜನ್ಮ ದಿನಾಂಕ (Date of Birth) ಮತ್ತು ವಿದ್ಯಾರ್ಹತೆಯ ವಿವರಗಳು ಸರ್ಟಿಫಿಕೇಟ್‌ನಲ್ಲಿ ಇರೋ ಹಾಗೆ ಅಚ್ಚುಕಟ್ಟಾಗಿ ನಮೂದಿಸಬೇಕು.

ಅಪ್ಲಿಕೇಶನ್‌ನಲ್ಲಿ ಎಲ್ಲಾದರೂ ತಪ್ಪು ಮಾಹಿತಿ ಕೊಟ್ರೆ ಮುಂದಿನ ಹಂತದಲ್ಲಿ ದೊಡ್ಡ ತೊಂದರೆ ಆಗಬಹುದು. ಅದ್ರಿಂದ ಸಬ್ಮಿಟ್ ಮಾಡೋಕು ಮುನ್ನ ಒಮ್ಮೆ ಕ್ರಾಸ್ ಚೆಕ್ ಮಾಡ್ಕೊಳ್ಳಿ.

ಹಾಗೆ, ನಿಮಗೆ ಸಿಗೋ Registration ID ಮತ್ತು ಲಾಗಿನ್ ಡೀಟೇಲ್ಸ್ ಅನ್ನು ತುಂಬಾ ಜೋಪಾನವಾಗಿ ಸೇವ್ ಮಾಡಿಟ್ಕೊಳ್ಳಿ. ಮುಂದಿನ ದಿನಗಳಲ್ಲಿ ಅಪ್ಲಿಕೇಶನ್ ಸ್ಟೇಟಸ್ ಅಥವಾ ಅಪ್‌ಡೇಟ್ಸ್‌ ನೋಡೋಕೆ ಇದು ಕಡ್ಡಾಯವಾಗಿ ಬೇಕಾಗುತ್ತೆ.

HK ಅಥವಾ Non-HK Region ಆಯ್ಕೆ ಹೇಗೆ?

ಈ ನೇಮಕಾತಿಯಲ್ಲಿ ಅತ್ಯಂತ ಮುಖ್ಯವಾದ ಹಂತ ಅಂದ್ರೆ ಅದು ರೀಜನ್ (Region) ಸೆಲೆಕ್ಟ್ ಮಾಡೋದು. ಅಧಿಕೃತ ಪೋರ್ಟಲ್‌ನಲ್ಲಿ HK Region ಹಾಗೂ Non-HK Region ಅಂತ ಎರಡು ಆಪ್ಷನ್ ಇದೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು HK Region ಆಯ್ಕೆ ಮಾಡ್ಕೋಬೇಕು. ಉಳಿದ ಪ್ರದೇಶದವರಿಗೆ Non-HK Region ಅನ್ವಯಿಸುತ್ತೆ.

ಇಲ್ಲಿ ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯ ಅಂದ್ರೆ, ಯಾರೂ ಕೂಡ ಏಕಕಾಲಕ್ಕೆ HK ಮತ್ತು Non-HK ಎರಡಕ್ಕೂ ಅಪ್ಲೈ ಮಾಡೋಕೆ ಬರೋದು. ಪೋರ್ಟಲ್‌ನಲ್ಲಿ ಒಂದೇ ರೀಜನ್ ಸೆಲೆಕ್ಟ್ ಮಾಡೋಕೆ ಮಾತ್ರ ಅವಕಾಶ ಇರೋದ್ರಿಂದ, ಆತುರದಲ್ಲಿ ತಪ್ಪು ಮಾಡ್ಬೇಡಿ. ಆನ್‌ಲೈನ್ ಅಪ್ಲಿಕೇಶನ್ ವೇಳೆ ಏನೇನು ಗಮನಿಸಬೇಕು?

ಮೊದಲು ಅಧಿಕೃತ ವೆಬ್‌ಸೈಟ್‌ಗೆ ಹೋಗಿ ರಿಜಿಸ್ಟ್ರೇಷನ್ ಮುಗಿಸಿ. ನೊಂದಣಿ ಆದ್ಮೇಲೆ ಲಾಗಿನ್ ಆಗಿ ಉಳಿದ ಪ್ರಕ್ರಿಯೆ ಮುಂದುವರಿಸಿ.ಅರ್ಜಿ ತುಂಬುವಾಗ ಹೆಸರು, ಡೇಟ್ ಆಫ್ ಬರ್ತ್, ಎಜ್ಯುಕೇಷನ್ ಡೀಟೇಲ್ಸ್ ಎಲ್ಲಾ ತುಂಬಾನೇ ಕೇರ್ಫುಲ್ ಆಗಿ ಹಾಕಿ. ಒರಿಜಿನಲ್ ಡಾಕ್ಯುಮೆಂಟ್ಸ್‌ಗೂ ಅಪ್ಲಿಕೇಶನ್‌ಗೂ ಡೀಟೇಲ್ಸ್ ಮ್ಯಾಚ್ ಆಗದಿದ್ರೆ ವೆರಿಫಿಕೇಶನ್ ಟೈಮ್‌ನಲ್ಲಿ ಪ್ರಾಬ್ಲಮ್ ಆಗುತ್ತೆ.

ಎಲ್ಲಾ ಕಂಪ್ಲೀಟ್ ಆದ್ಮೇಲೆ ಫೈನಲ್ ಸಬ್ಮಿಟ್ ಕೊಡೋಕು ಮುಂಚೆ ಒಂದ್ಸತಿ ಪೂರ್ತಿ ಓದ್ಕೊಳ್ಳಿ. ಅಪ್ಲಿಕೇಶನ್ ಕಾಪಿ ಅಥವಾ ಅಕ್ನಾಲೆಜ್ಮೆಂಟ್ ಅನ್ನು ಮರೆಯದೆ ಡೌನ್‌ಲೋಡ್ ಮಾಡಿ ಪ್ರಿಂಟ್ ಅಥವಾ ಪಿಡಿಎಫ್ ಸೇವ್ ಮಾಡಿಟ್ಕೊಳ್ಳಿ.ಕೊನೆಯ ದಿನಾಂಕಕ್ಕೂ ಮುಂಚೆಯೇ ಅರ್ಜಿ ಹಾಕಿ

ಅರಣ್ಯ ಇಲಾಖೆ ಫಾರೆಸ್ಟ್ ವಾಚರ್ ಹುದ್ದೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, 2026 ಕೊನೆಯ ದಿನವಾಗಿದೆ ಅಂತ ಅಧಿಕೃತ ಪೋರ್ಟಲ್‌ನಲ್ಲಿ ತಿಳಿಸಲಾಗಿದೆ ಕೊನೆಯ ದಿನದವರೆಗೂ ಕಾಯ್ಕೊಂಡು ಕೂತ್ಕೊಂಡ್ರೆ ವೆಬ್‌ಸೈಟ್ ಸ್ಲೋ ಆಗೋದು, ಸರ್ವರ್ ಪ್ರಾಬ್ಲಮ್ ಅಥವಾ ಪೇಮೆಂಟ್ ಇಶ್ಯೂಸ್ ಬರೋ ಚಾನ್ಸಸ್ ಜಾಸ್ತಿ ಇರುತ್ತೆ.

ಅದ್ರಿಂದ ಆದಷ್ಟು ಬೇಗ ಅಪ್ಲೈ ಮಾಡ್ಬಿಡಿ.ಅರ್ಜಿ ಸಲ್ಲಿಸಿ ಮುಗಿದ ತಕ್ಷಣ ಅದರ ಸ್ಕ್ರೀನ್‌ಶಾಟ್ ಅಥವಾ ಪಿಡಿಎಫ್ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳೋದನ್ನು ಮರೆಯಬೇಡಿ.

ಫಾರೆಸ್ಟ್ ವಾಚರ್ ಸೆಲೆಕ್ಷನ್ ಪ್ರಕ್ರಿಯೆ ಹೇಗಿರುತ್ತೆ?

Forest Watcher Recruitment 2026

ಫಾರೆಸ್ಟ್ ವಾಚರ್ ರಿಕ್ರೂಟ್‌ಮೆಂಟ್ 2026ಕ್ಕೆ ಅರ್ಜಿ ಸಲ್ಲಿಸಿದ್ಮೇಲೆ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ನೇಮಕಾತಿ ಪ್ರಕ್ರಿಯೆ ಇರುತ್ತೆ.

ಆದ್ರೆ, ಆಯ್ಕೆ ಪ್ರಕ್ರಿಯೆಯ ನಿಖರವಾದ ಹಂತಗಳು, ಪರೀಕ್ಷೆ, ದೈಹಿಕ ಮಾನದಂಡಗಳು (Physical Standards) ಹಾಗೂ ಇಲಾಖೆಯ ನಿಯಮಗಳು ಅಧಿಕೃತ ಅಧಿಸೂಚನೆಯಲ್ಲೇ ಪ್ರಕಟವಾಗುತ್ತವೆ.

ಹಳೆಯ ನೋಟಿಫಿಕೇಶನ್‌ಗಳನ್ನು ನಂಬಿ ತಯಾರಿ ಮಾಡ್ಕೊಳ್ಳೋದಕ್ಕಿಂತ, 2026ರ ಲೇಟೆಸ್ಟ್ ಅಫಿಷಿಯಲ್ ನೋಟಿಫಿಕೇಶನ್‌ನಲ್ಲಿ ಏನೆಲ್ಲಾ ರೂಲ್ಸ್ ಕೊಟ್ಟಿದ್ದಾರೆ ಅಂತ ಚೆಕ್ ಮಾಡ್ಕೊಳ್ಳೋದು ತುಂಬಾ ಮುಖ್ಯ.ಡಾಕ್ಯುಮೆಂಟ್ ವೆರಿಫಿಕೇಶನ್ (Documents Verification)ಅರ್ಜಿ ಹಾಕುವಾಗ ನೀವು ಕೊಟ್ಟಿರುವ ಮಾಹಿತಿಗೆ ತಕ್ಕಂತೆ ಮುಂದಿನ ಹಂತದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತೆ.

ಅದ್ರಿಂದ ನಿಮ್ಮ ವಿದ್ಯಾರ್ಹತೆ, ವಯಸ್ಸು, ಜಾತಿ ಮತ್ತು ಇತರ ಅರ್ಹತೆಗಳಿಗೆ ಬೇಕಾಗುವ ಅಚ್ಚುಕಟ್ಟಾದ ಮೂಲ ದಾಖಲೆಗಳನ್ನು (Original Documents) ಈಗಲೇ ರೆಡಿ ಮಾಡಿಟ್ಟುಕೊಳ್ಳಿ.ಅರ್ಜಿಯಲ್ಲಿ ಭರ್ತಿ ಮಾಡಿರುವ ಡೀಟೇಲ್ಸ್ ಮತ್ತು ನಿಮ್ಮ ಒರಿಜಿನಲ್ ಸರ್ಟಿಫಿಕೇಟ್‌ನಲ್ಲಿ ಇರೋದು ಒಂದೇ ಹಾಗಿದೆ ಅನ್ನೋದನ್ನ ಮೊದಲೇ ಖಚಿತಪಡಿಸಿಕೊಳ್ಳಿ.

ನಕಲಿ ಲಿಂಕ್‌ಗಳ ಬಗ್ಗೆ ಇರಲಿ ಎಚ್ಚರಿಕೆ!

Realistic editoriForest Watcher Recruitment 2026

ಅರಣ್ಯ ಇಲಾಖೆ ಉದ್ಯೋಗಗಳಿಗೆ ಫುಲ್ ಡಿಮಾಂಡ್ ಇರೋದ್ರಿಂದ, ಕೆಲವು ಕಡೆ ಫೇಕ್ ರಿಕ್ರೂಟ್‌ಮೆಂಟ್ ಲಿಂಕ್‌ಗಳು ಮತ್ತು ಸುಳ್ಳು ಮಾಹಿತಿ ಹರಿದಾಡೋ ಚಾನ್ಸಸ್ ಇರುತ್ತೆ. ಅದೆಲ್ಲಾ ಗೊತ್ತಿದ್ದು ನೀವು ಹುಷಾರಾಗಿರಬೇಕು.ಯಾವಾಗ್ಲೂ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಪೋರ್ಟಲ್ ಮೂಲಕವೇ (https://recruitment.aranya.gov.in) ಅಪ್ಲೈ ಮಾಡಿ. ವಾಟ್ಸಾಪ್ ಅಥವಾ ಟೆಲಿಗ್ರಾಮ್‌ನಲ್ಲಿ ಬರುವ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಿ ಮೋಸ ಹೋಗ್ಬೇಡಿ.

ಹಾಗೆ ಅಪ್ಲಿಕೇಶನ್ ಫೀಸ್ ಕಟ್ಟುವಾಗಲೂ ಪೋರ್ಟಲ್‌ನಲ್ಲಿರುವ ಅಧಿಕೃತ ಪೇಮೆಂಟ್ ಗೇಟ್‌ವೇ ಮಾತ್ರ ಯೂಸ್ ಮಾಡಿ.

ಅರ್ಜಿ ಸಲ್ಲಿಸಿದ ಮೇಲೆ ಏನ್ ಮಾಡ್ಬೇಕು?

ಫಾರೆಸ್ಟ್ ವಾಚರ್ ಆನ್‌ಲೈನ್ ಅಪ್ಲಿಕೇಶನ್ ಮುಗಿದ ತಕ್ಷಣ, ಆ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲ ಡೀಟೇಲ್ಸ್‌ ಜೋಪಾನವಾಗಿಟ್ಕೋಬೇಕು.ನಿಮ್ಮ Registration ID, ಅಪ್ಲಿಕೇಶನ್ ಅಕ್ನಾಲೆಜ್ಮೆಂಟ್ ಮತ್ತು ಪೇಮೆಂಟ್ ರಶೀದಿಗಳ ಸ್ಕ್ರೀನ್‌ಶಾಟ್ ಅಥವಾ PDF ಕಾಪಿಯನ್ನು ಮೊಬೈಲ್ ಹಾಗೂ ಮೇಲ್‌ನಲ್ಲಿ ಸೇವ್ ಮಾಡಿಟ್ಕೊಳ್ಳಿ.

ಜೊತೆಗೆ ಮುಂದಿನ ಅಪ್‌ಡೇಟ್ಸ್‌ಗಾಗಿ ಅರಣ್ಯ ಇಲಾಖೆಯ ವೆಬ್‌ಸೈಟ್ ಅನ್ನು ಆಗಾಗ ವಿಸಿಟ್ ಮಾಡ್ತಿರಿ.ಅರ್ಜಿ ಹಾಕಿದ ಕೂಡಲೇ ಸೆಲೆಕ್ಷನ್ ಆಗೋಯ್ತು ಅಂತ ಅಂದುಕೊಳ್ಳೋಕೆ ಹೋಗಬೇಡಿ. ಇಲಾಖೆಯ ಅಫಿಷಿಯಲ್ ಶೆಡ್ಯೂಲ್ ಪ್ರಕಾರವೇ ಮುಂದಿನ ಹಂತಗಳು ನಡೆಯುತ್ತವೆ.

ಪ್ರಮುಖ ದಿನಾಂಕಅಧಿಕೃತ ಪೋರ್ಟಲ್ ಪ್ರಕಾರ ಫಾರೆಸ್ಟ್ ವಾಚರ್ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 30, 2026 ಆಗಿದೆ.

ಹಾಗಾಗಿ ಆಸಕ್ತರು ಲಾಸ್ಟ್ ಡೇಟ್ ವರೆಗೂ ವೇಟ್ ಮಾಡ್ಬೇಡಿ. ನಿಮ್ ಅರ್ಹತೆ ಮತ್ತು ಡಾಕ್ಯುಮೆಂಟ್ಸ್ ಒಮ್ಮೆ ಚೆಕ್ ಮಾಡ್ಕೊಂಡು ಆದಷ್ಟು ಬೇಗ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಮುಗಿಸಿಬಿಡಿ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಫಾರೆಸ್ಟ್ ವಾಚರ್ ಆಗಬೇಕು ಅಂತ ಕನಸು ಕಂಡಿರೋರು ಮೊದಲು ಎಲಿಜಿಬಿಲಿಟಿ ಏನಿG ಅಂತ ನೋಡಿಕೊಳ್ಳಿ.

ಆಮೇಲೆ ಸರಿಯಾದ ರೀಜನ್ (HK ಅಥವಾ Non-HK) ಸೆಲೆಕ್ಟ್ ಮಾಡಿ ಅಫಿಷಿಯಲ್ ಪೋರ್ಟಲ್‌ನಲ್ಲಿ ರಿಜಿಸ್ಟ್ರೇಷನ್ ಮುಗಿಸಿ.

ನೆನಪಿಡಿ, HK ಅಥವಾ Non-HK ರೀಜನ್ ಆಯ್ಕೆ ಮಾಡುವಾಗ ತುಂಬಾನೇ ಕೇರ್ಫುಲ್ ಆಗಿರಬೇಕು.

ಯಾಕಂದ್ರೆ ಎರಡು ಕಡೆ ಪ್ರತ್ಯೇಕವಾಗಿ ಅರ್ಜಿ ಹಾಕೋಕೆ ಬರೋದಿಲ್ಲ.ಕೊನೆಯ ದಿನಾಂಕ ಸೆಪ್ಟೆಂಬರ್ 30, 2026 ಇರೋದ್ರಿಂದ ಟೈಮ್ ವೇಸ್ಟ್ ಮಾಡದೆ ಬೇಗ ಅಪ್ಲೈ ಮಾಡಿ. ನೇಮಕಾತಿಗೆ ಸಂಬಂಧಿಸಿದ ಯಾವುದೇ ಹೊಸ ಅಪ್‌ಡೇಟ್ ಬಂದ್ರು ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲೇ ನೋಡಿಕೊಳ್ಳಿ.

ಅರಣ್ಯ ಇಲಾಖೆ ಅಧಿಕೃತ ವೆಬ್ಸೈಟ್ https://recruitment.aranya.gov.ಇನ್

.join unizonekannada WhatsApp channel

Flipkart Big Billion Days 2026: Smartphones, Gadgets ಸೇರಿ ಭರ್ಜರಿ Deals; Sale ಯಾವಾಗ?

Leave a Comment