ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ದೊಡ್ಡದೊಂದು ಬದಲಾವಣೆಗೆ ವೇದಿಕೆ ಸಿದ್ಧವಾಗ್ತಿದೆ.
(BSNL and Vi Mega Deal) ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ (BSNL) ಹಾಗೂ ಖಾಸಗಿ ಟೆಲಿಕಾಂ ದಿಗ್ಗಜ ವೊಡಾಫೋನ್ ಐಡಿಯಾ (Vi) ಪರಸ್ಪರ ಕೈಜೋಡಿಸಿವೆ. ಜಿಯೋ ಮತ್ತು ಏರ್‌ಟೆಲ್ ಆಧಿಪತ್ಯವಿರುವ ಈ ರಂಗದಲ್ಲಿ ನೆಟ್‌ವರ್ಕ್ ಶೇರಿಂಗ್ ಮಾಡಿಕೊಳ್ಳಲು ಎರಡೂ ಕಂಪನಿಗಳು ಒಪ್ಪಂದ ಮಾಡಿಕೊಂಡಿದ್ದು, ಟೆಲಿಕಾಂ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.
ಇಷ್ಟು ದಿನ ಬಿಎಸ್‌ಎನ್‌ಎಲ್ ಮತ್ತು ವಿ ಮಧ್ಯೆ ರೋಮಿಂಗ್ ವ್ಯವಸ್ಥೆ ಒಂದಷ್ಟು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿತ್ತು. ಆದ್ರೆ ಇನ್ಮುಂದೆ ಈ ವ್ಯವಸ್ಥೆಯನ್ನು ಇಡೀ ದೇಶಕ್ಕೇ ವಿಸ್ತರಿಸಲು ಪ್ಲಾನ್ ಮಾಡ್ತಿದ್ದಾರೆ. ಇದು ಜಾರಿಗೆ ಬಂದ್ರೆ ಗ್ರಾಹಕರಿಗೆ ಸಿಗ್ನಲ್ ಸಮಸ್ಯೆ ತಪ್ಪಿ, ನೆಟ್‌ವರ್ಕ್ ಮತ್ತಷ್ಟು ಸ್ಟ್ರಾಂಗ್ ಆಗ ಸಿಗುವ ಸಾಧ್ಯತೆಯಿದೆ.
ಒಪ್ಪಂದದ ಪ್ರಮುಖ ಮೂರು ಅಸ್ತ್ರಗಳುಈ ಒಪ್ಪಂದದ ಹಿಂದೆ ಪ್ರಮುಖವಾಗಿ ಮೂರು ವಿಚಾರಗಳಿವೆ. ಅದೇ ರೋಮಿಂಗ್, ಟವರ್ ಹಾಗೂ ಆಪ್ಟಿಕಲ್ ಫೈಬರ್ ಹಂಚಿಕೆ.
ರೋಮಿಂಗ್ ವ್ಯವಸ್ಥೆ: ಇದರ ಅಡಿಯಲ್ಲಿ ಬಿಎಸ್‌ಎನ್‌ಎಲ್ ಗ್ರಾಹಕರು ನೆಟ್‌ವರ್ಕ್ ಸಿಗದ ಜಾಗದಲ್ಲಿ Vi ನೆಟ್‌ವರ್ಕ್ ಬಳಸಬಹುದು. ಅದೇ ರೀತಿ Vi ಗ್ರಾಹಕರಿಗೂ ಬಿಎಸ್‌ಎನ್‌ಎಲ್ ಸಿಗ್ನಲ್ ಸಿಗುವ ಅವಕಾಶವಿರುತ್ತದೆ.
ಯಾಕಂದ್ರೆ ಸಿಗ್ನಲ್ ಇಲ್ಲದೆ ಪರದಾಡುವ ಗ್ರಾಮೀಣ ಭಾಗದ ಜನರಿಗೆ ಇದರಿಂದ ದೊಡ್ಡ ಮಟ್ಟದ ಅನುಕೂಲವಾಗಲಿದೆ. ಟವರ್ ಶೇರಿಂಗ್: ದೇಶದ ಮೂಲೆ ಮೂಲೆಗಳಲ್ಲೂ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಹತ್ತಿರ ಹಳೇ ಹಾಗೂ ದೊಡ್ಡ ಮಟ್ಟದ ಟವರ್ ನೆಟ್‌ವರ್ಕ್ ಇದೆ.

BSNL and Vi Mega Deal
ಹಾಗಾಗಿ Vi ಪ್ರತ್ಯೇಕವಾಗಿ ಹೊಸ ಟವರ್ ಹಾಕುತ್ತ ಕೂರೋ ಬದಲು, ಬಿಎಸ್‌ಎನ್‌ಎಲ್ ಲಭ್ಯವಿರುವ ಮೂಲಸೌಕರ್ಯ ಬಳಸಿಕೊಂಡ್ರೆ ಖರ್ಚು ತುಂಬಾನೇ ಉಳಿಯುತ್ತೆ. ಇದರಿಂದ Vi ತನ್ನ 4G ಕವರೇಜ್ ಅನ್ನು ಬೇಗನೆ ವಿಸ್ತರಿಸಿಕೊಳ್ಳಲು ಹೆಲ್ಪ್ ಆಗುತ್ತೆ.
ಫೈಬರ್ ಶೇರಿಂಗ್: ಎರಡೂ ಕಂಪನಿಗಳು ಫೈಬರ್ ನೆಟ್‌ವರ್ಕ್ ಅನ್ನು ಶೇರ್ ಮಾಡಿಕೊಂಡರೆ, ಒಂದೇ ಏರಿಯಾದಲ್ಲಿ ಪ್ರತ್ಯೇಕವಾಗಿ ಹೊಸ ಲೈನ್ ಹಾಕುವ ಕೆಲಸ ತಪ್ಪುತ್ತದೆ. ಇದರಿಂದ ಸಮಯ ಹಾಗೂ ಹಣ ಎರಡೂ ಉಳಿಯುವುದರ ಜೊತೆಗೆ, ಈಗಿರುವ ನೆಟ್‌ವರ್ಕ್ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಬಹುದು.ಎರಡೂ ಕಂಪನಿಗಳಿಗೆ ಇದರಿಂದೇನು ಲಾಭ?ಬಿಎಸ್‌ಎನ್‌ಎಲ್ ಬಳಿ ಹೋದ್ರೂ ಮುಗಿಯದಷ್ಟು ದೊಡ್ಡ ಮೂಲಸೌಕರ್ಯವಿದೆ.
ಜಾಗ, ಟವರ್ ಹಾಗೂ ಫೈಬರ್ ನೆಟ್‌ವರ್ಕ್ ಎಲ್ಲವೂ ಇದೆ. ಆದ್ರೆ ಖಾಸಗಿ ಕಂಪನಿಗಳ ಜೊತೆ ಮಾರ್ಕೆಟಿಂಗ್ ಹಾಗೂ ಕಸ್ಟಮರ್ ಸೆಳೆಯುವ ವಿಚಾರದಲ್ಲಿ ಮಾತ್ರ ಸ್ವಲ್ಪ ಹಿಂದೆ ಬಿದ್ದಿದೆ.ಇಲ್ಲಿ Vi ಎಂಟ್ರಿ ಕೊಡುತ್ತೆ. ಖಾಸಗಿ ಕಂಪನಿಯಾಗಿರೋದ್ರಿಂದ ಮಾರ್ಕೆಟಿಂಗ್, ಕಸ್ಟಮರ್ ಕೇರ್ ಹಾಗೂ ಬಿಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ Viಗೆ ಒಳ್ಳೆಯ ಅನುಭವವಿದೆ.
ಹೀಗಾಗಿ ಬಿಎಸ್‌ಎನ್‌ಎಲ್ ಹತ್ರ ಇರೋ ಮೂಲಸೌಕರ್ಯ ಮತ್ತು Vi ಹತ್ರ ಇರೋ ವಾಣಿಜ್ಯ ಅನುಭವ ಒಂದಾದ್ರೆ ಎರಡೂ ಕಡೆಗೂ ಲಾಭವಾಗಲಿದೆ. ಮುಖ್ಯವಾಗಿ Viಗೆ ನೆಟ್‌ವರ್ಕ್ ವಿಸ್ತರಿಸಲು ತಗಲುವ ಖರ್ಚು ಭಾರೀ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಮುಂದಿನ ದಿನಗಳಲ್ಲಿ 5G ವಿಸ್ತರಣೆಗೂ ಇದು ತುಂಬಾನೇ ಪ್ಲಸ್ ಆಗಲಿದೆ.
ಇನ್ನೊಂದೆಡೆ ಬಿಎಸ್‌ಎನ್‌ಎಲ್ ಗ್ರಾಹಕರಿಗೂ ಸಿಗ್ನಲ್ ವೀಕ್ ಇರೋ ಕಡೆ Vi ನೆಟ್‌ವರ್ಕ್ ಸಿಕ್ಕಂತಾಗಿ, ಕವರೇಜ್ ಸಮಸ್ಯೆ ದೂರವಾಗುತ್ತೆ.ಜಿಯೋ, ಏರ್‌ಟೆಲ್‌ಗೆ ಟಕ್ಕರ್ ಕೊಡೋಕಾಗುತ್ತಾ?ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್‌ಟೆಲ್ ಈಗಲೂ ಪ್ರಬಲ ಸ್ಥಾನದಲ್ಲೇ ಇವೆ. ದೊಡ್ಡ ಗ್ರಾಹಕರ ಪಡೆ ಜೊತೆಗೆ ಅವ್ರ ಹತ್ರ ಅತಿ ಹೆಚ್ಚಿನ ಟವರ್ ಹಾಗೂ ಫೈಬರ್ ನೆಟ್‌ವರ್ಕ್ ಇದೆ.
ಹಾಗಾಗಿ ಈ ಎರಡು ಕಂಪನಿಗಳನ್ನು ಬಿಎಸ್‌ಎನ್‌ಎಲ್ ಮತ್ತು Vi ಒಟ್ಟಾಗಿ ತಕ್ಷಣವೇ ನೇರವಾಗಿ ಎದುರಿಸೋದು ಕಷ್ಟವೇ.ಆದ್ರೆ ಇಬ್ಬರೂ ಸೇರಿ ಖರ್ಚು ಕಡಿಮೆ ಮಾಡಿಕೊಂಡು, ತಮ್ಮ ನೆಟ್‌ವರ್ಕ್ ಅನ್ನು ಬಲಪಡಿಸಿಕೊಂಡು ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನಿಲ್ಲಲು ಈ ಒಪ್ಪಂದ ಸಹಾಯ ಮಾಡಲಿದೆ.
ಅಂದ್ಹಾಗೆ, ಈ ಒಪ್ಪಂದ ಆಗ್ತಿದ್ದ ಹಾಗೆ ರೀಚಾರ್ಜ್ ಬೆಲೆಗಳು ತಕ್ಷಣಕ್ಕೆ ಕಡಿಮೆ ಆಗುತ್ತವೆ ಅಂತ ಖಂಡಿತ ಹೇಳೋಕಾಗಲ್ಲ. ಮುಂದಿನ ದಿನಗಳಲ್ಲಿ ಬರುವ ವಾಣಿಜ್ಯ ನಿರ್ಧಾರಗಳ ಮೇಲೆ ಅದು ನಿಂತಿರುತ್ತದೆ. ಆದ್ರೆ ಖರ್ಚು ಉಳಿದರೆ ಆ ಬೆನಿಫಿಟ್ ಅನ್ನು ಮುಂದೆ ಗ್ರಾಹಕರಿಗೂ ನೀಡುವ ಆಲೋಚನೆ ಕಂಪನಿಗಳಿಗಿರಬಹುದು.
ಎಲ್ಲವೂ ಅಂದುಕೊಂಡಂತೆ ಆಗುತ್ತಾ?
ನೆಟ್‌ವರ್ಕ್ ಶೇರ್ ಮಾಡಿಕೊಂಡ ಕೂಡಲೇ ಎಲ್ಲ ಸಮಸ್ಯೆಗಳು ಮ್ಯಾಜಿಕ್ ಮಾಡಿದ ಹಾಗೆ ಮಾಯವಾಗಲ್ಲ. Vi ಮೇಲೆ ಈಗಲೂ ದೊಡ್ಡ ಪ್ರಮಾಣದ (BSNL and Vi Mega Deal) ಸಾಲದ ಹಾಗೂ ಹಣಕಾಸಿನ ಹೊರೆಯಿದೆ. AGR ಮತ್ತು ಸ್ಪೆಕ್ಟ್ರಮ್ ಬಾಕಿ ಮೊತ್ತ ಕಂಪನಿಗೆ ದೊಡ್ಡ ತಲೆನೋವಾಗಿದೆ.

BSNL and Vi Mega Deal
ಬಿಎಸ್‌ಎನ್‌ಎಲ್ ಕೂಡ ಆರ್ಥಿಕ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ. ಸರ್ಕಾರ ಕೂಡ ಬಿಎಸ್‌ಎನ್‌ಎಲ್ ಉಳಿವಿಗಾಗಿ ಕೋಟಿ ಕೋಟಿ ಹಣ ಹೂಡಿಕೆ ಮಾಡಿ, 4G ಮತ್ತು 5G ಬಲಪಡಿಸುವ ಕೆಲಸ ಮಾಡ್ತಿದೆ.
ಒಟ್ಟಿನಲ್ಲಿ ಹೇಳೋದಾದ್ರೆ, ಈ ನೆಟ್‌ವರ್ಕ್ ಶೇರಿಂಗ್ ಒಪ್ಪಂದದಿಂದ ಎರಡೂ ಕಂಪನಿಗಳು ತಮ್ಮ ಬಂಡವಾಳದ ಖರ್ಚನ್ನು ತಗ್ಗಿಸಿಕೊಳ್ಳಬಹುದು. ಇದು ಮುಂದಿನ ದಿನಗಳಲ್ಲಿ ಟೆಲಿಕಾಂ ರಂಗದಲ್ಲಿ ಮತ್ತೊಂದು ಬಲಿಷ್ಠ ಪರ್ಯಾಯವಾಗಿ ಬೆಳೆಯಲು Vi ಹಾಗೂ ಬಿಎಸ್‌ಎನ್‌ಎಲ್‌ಗೆ ಸಹಾಯ ಮಾಡೋದಂತೂ ಖಚಿತ.
ಬಿಎಸ್‌ಎನ್‌ಎಲ್ (BSNL) ಮತ್ತು ವೊಡಾಫೋನ್ ಐಡಿಯಾ (Vi) ಮಧ್ಯೆ ನಡೆದಿರುವ ನೆಟ್‌ವರ್ಕ್ ಶೇರಿಂಗ್ ಒಪ್ಪಂದವು ಭಾರತೀಯ ಟೆಲಿಕಾಂ ರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಸದ್ಯದ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್‌ಟೆಲ್ ಸಿಂಹಪಾಲು ಹೊಂದಿದ್ದು, ಇವೆರಡರ ಮುಂದೆ ಬಿಎಸ್‌ಎನ್‌ಎಲ್ ಹಾಗೂ Vi ಮಾರುಕಟ್ಟೆ ಪಾಲು ತೀರಾ ಕಡಿಮೆ ಇದೆ.
ಆದ್ರೆ, ಈ ಹೊಸ ಒಪ್ಪಂದದಿಂದ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ.ಮೂಲಸೌಕರ್ಯ ಹಂಚಿಕೆಯಿಂದ ಖರ್ಚಿಗೆ ಬ್ರೇಕ್ಎರಡೂ ಕಂಪನಿಗಳು ತಮ್ಮಲ್ಲಿರುವ ಸೌಲಭ್ಯಗಳನ್ನು ಪರಸ್ಪರ ಬಳಸಿಕೊಳ್ಳುವುದರಿಂದ ಹೊಸದಾಗಿ ಟವರ್ ಹಾಗೂ ಫೈಬರ್ ನೆಟ್‌ವರ್ಕ್ ನಿರ್ಮಿಸುವ ದೊಡ್ಡ ಮೊತ್ತದ ಖರ್ಚು ಉಳಿಯಲಿದೆ.

BSNL and Vi Mega Deal
ಹೀಗೆ ಉಳಿಯುವ ಬಂಡವಾಳವನ್ನು ನೆಟ್‌ವರ್ಕ್ ಮತ್ತಷ್ಟು ಸುಧಾರಿಸಲು ಹಾಗೂ ಕಸ್ಟಮರ್ ಸೇವೆಗಳನ್ನು ಉತ್ತಮಪಡಿಸಲು ಬಳಸಿಕೊಳ್ಳಲು ಅವಕಾಶ ಸಿಗಲಿದೆ.ಗ್ರಾಮೀಣ ಭಾಗದ ಕವರೇಜ್‌ಗೆ ಬಲಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್‌ಎನ್‌ಎಲ್ ಬಹಳ ಹಿಂದಿನಿಂದಲೂ ದೊಡ್ಡ ಮಟ್ಟದ ನೆಟ್‌ವರ್ಕ್ ಮೂಲಸೌಕರ್ಯವನ್ನು ಹೊಂದಿದೆ.
Vi ಕಂಪನಿಗೆ ಈ ಮೂಲಸೌಕರ್ಯದ ಸಾಥ್ ಸಿಕ್ಕರೆ, ಸಿಗ್ನಲ್ ಕೊರತೆ ಇರುವ ಕಡೆಗಳಲ್ಲೂ ತನ್ನ ಸೇವೆಯನ್ನು ಸುಲಭವಾಗಿ ವಿಸ್ತರಿಸಿಕೊಳ್ಳಬಹುದು.
ಅದೇ ರೀತಿಯಾಗಿ, ಬಿಎಸ್‌ಎನ್‌ಎಲ್ ಗ್ರಾಹಕರಿಗೂ ಕೂಡ Vi ನೆಟ್‌ವರ್ಕ್ ಲಭ್ಯವಿರುವ ಕಡೆಗಳಲ್ಲಿ ಹೆಚ್ಚುವರಿ ಕವರೇಜ್ ಸಿಗುವ ಅವಕಾಶ ವಿಸ್ತಾರಗೊಳ್ಳಲಿದೆ.ಇದ್ರಿಂದ ಎರಡೂ ಕಂಪನಿಗಳು ಪ್ರತ್ಯೇಕವಾಗಿ ಒಂದೇ ಜಾಗದಲ್ಲಿ ಮೂಲಸೌಕರ್ಯ ಹಾಕುವ ಇಕ್ಕಟ್ಟು ತಪ್ಪುವುದಲ್ಲದೆ, ಸಮಯ ಹಾಗೂ ಹಣ ಎರಡೂ ಉಳಿಯುತ್ತದೆ.4G ಮತ್ತು 5G ವಿಸ್ತರಣೆಗೆ ಹೊಸ ವೇಗಬಿಎಸ್‌ಎನ್‌ಎಲ್ ತನ್ನ 4G ಸೇವೆಯನ್ನು ದೇಶಾದ್ಯಂತ ವೇಗವಾಗಿ ವಿಸ್ತರಿಸುವ ಹಾದಿಯಲ್ಲಿದ್ದು, ಮುಂದಿನ ದಿನಗಳಲ್ಲಿ 5G ಕಡೆಗೂ ಗಮನ ಹರಿಸುತ್ತಿದೆ.
ಇತ್ತ Vi ಕೂಡ ತನ್ನ ನೆಟ್‌ವರ್ಕ್ ಸಾಮರ್ಥ್ಯವನ್ನು ಬಲಪಡಿಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಟವರ್ ಹಾಗೂ ಫೈಬರ್ ಶೇರಿಂಗ್ ಮಾಡಿಕೊಳ್ಳುವುದರಿಂದ ನೆಟ್‌ವರ್ಕ್ ವಿಸ್ತರಣೆಗೆ ತಗಲುವ ಸಮಯ ಗಮನಾರ್ಹವಾಗಿ ತಗ್ಗಲಿದೆ.
ಜಿಯೋ ಮತ್ತು ಏರ್‌ಟೆಲ್‌ಗೆ ತಕ್ಕ ಪೈಪೋಟಿ ಕೊಡಬಹುದೇ?
ಕೇವಲ ಈ ಒಪ್ಪಂದ ಆಯಿತು ಎಂದ ಮಾತ್ರಕ್ಕೆ ಜಿಯೋ ಮತ್ತು ಏರ್‌ಟೆಲ್ ಆಧಿಪತ್ಯಕ್ಕೆ ತಕ್ಷಣವೇ ದೊಡ್ಡ ಪೆಟ್ಟು ಬೀಳುತ್ತದೆ ಎಂದು ಹೇಳಲಾಗದು. ಯಾಕಂದ್ರೆ ಆ ಎರಡು ಖಾಸಗಿ ದೈತ್ಯ ಕಂಪನಿಗಳು ಈಗಾಗಲೇ ಬೃಹತ್ ಗ್ರಾಹಕ ನೆಲೆ ಹಾಗೂ ಬಲಿಷ್ಠ ನೆಟ್‌ವರ್ಕ್ ಹೊಂದಿದೆ.

BSNL and Vi Mega Deal
ಆದರೆ, ಬಿಎಸ್‌ಎನ್‌ಎಲ್ ಮತ್ತು Vi ಒಟ್ಟಾಗಿ ತಮ್ಮ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಕವರೇಜ್, ಕಡಿಮೆ ವೆಚ್ಚದ ಸೇವೆ ಹಾಗೂ ಸ್ಪರ್ಧಾತ್ಮಕ ರೀಚಾರ್ಜ್ ಪ್ಲಾನ್‌ಗಳನ್ನು ನೀಡಿದರೆ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮತ್ತೊಂದು ಪ್ರಬಲ ಆಯ್ಕೆ ಸಿಕ್ಕಂತಾಗುತ್ತದೆ.
ಇದು ಟೆಲಿಕಾಂ ರಂಗದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಹುಟ್ಟುಹಾಕಲಿದ್ದು, ಅಂತಿಮವಾಗಿ ಇದರ ನೇರ ಲಾಭ ಗ್ರಾಹಕರ ಪಾಲಿಗೇ ಒಲಿಯುವ ನಿರೀಕ್ಷೆಯಿದೆ.
ಮುಂದಿನ ದಾರಿ ಹೇಗಿರಲಿದೆ?ಈ ಒಪ್ಪಂದದ ಯಶಸ್ಸು ಸಂಪೂರ್ಣವಾಗಿ ಎರಡೂ ಕಂಪನಿಗಳು ಇದನ್ನು ಎಷ್ಟು ಗಟ್ಟಿಯಾಗಿ ಮತ್ತು ಪರಿಣಾಮಕಾರಿಯಾಗಿ ಗ್ರೌಂಡ್ ಮಟ್ಟದಲ್ಲಿ ಜಾರಿಗೆ ತರುತ್ತವೆ ಎಂಬುದರ ಮೇಲೆ ನಿಂತಿದೆ.
. ಕೇವಲ ನೆಟ್‌ವರ್ಕ್ ಹಂಚಿಕೆ ಮಾತ್ರದಿಂದ BSNL ಮತ್ತು Vi ಎದುರಿಸುತ್ತಿರುವ ಸಾಲ ಹಾಗೂ ಇನ್ನಿತರ ಎಲ್ಲಾ ಆರ್ಥಿಕ ಬಿಕ್ಕಟ್ಟುಗಳು ಒಂದೇ ರಾತ್ರಿಯಲ್ಲಿ ಬಗೆಹರಿಯುವುದಿಲ್ಲ. ಆದರೂ ಕೂಡ, ಖರ್ಚು ಕಡಿತಗೊಳಿಸಿ ಸೇವೆಯನ್ನು ಮೇಲಕ್ಕೆತ್ತುವ ಈ ಹೆಜ್ಜೆ ಎರಡೂ ಕಂಪನಿಗಳ ಮುಂಬರುವ ದಿನಗಳಿಗೆ ಆಸರೆಯಾಗಲಿದೆ.
ಮುಂಬರುವ ದಿನಗಳಲ್ಲಿ ಈ ಒಪ್ಪಂದದಿಂದ ಕವರೇಜ್ ಎಷ್ಟು ಮಟ್ಟಿಗೆ ಸುಧಾರಿಸುತ್ತದೆ ಮತ್ತು ಜಿಯೋ-ಏರ್‌ಟೆಲ್ ಜತೆಗೆ ಯಾವ ಮಟ್ಟದ ಸ್ಪರ್ಧೆ ಏರ್ಪಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಹೆಚ್ಚಿನ ಟೆಕ್ ವಿಷಯ ಗಳಿಗೆ https://kannada.gizbot.com ಅನ್ನು ವಿಸಿಟ್ ಮಾಡಿ
Nepal Floods Kannadigas : ನೇಪಾಳ ಪ್ರವಾಹದಲ್ಲಿ ಕನ್ನಡಿಗರು ಸಂಕಷ್ಟಕ್ಕೆ! ರಕ್ಷಣೆಗೆ ಕರ್ನಾಟಕ ಸರ್ಕಾರದ ತುರ್ತು ಸಹಾಯವಾಣಿ ಇದನ್ನು ಓದಿ…
